ನಾಳೆ ಎಂದವನ ಮನೆಹಾಳು

ಗಾದೆಗಳು ಹುಟ್ಟಿಕೊಂಡಿದ್ದು ಹೆಚ್ಚಾಗಿ ಗ್ರಾಮೀಣ ಹಿನ್ನೆಲೆಯಲ್ಲಿ; ಜನಸಾಮಾನ್ಯರನ್ನು ಎಚ್ಚರಿಸುವ ಉದ್ದೇಶದಿಂದಾಗಿ. ಹಳ್ಳಿಯಕಡೆ ಹೆಚ್ಚಾಗಿ ಹುಲ್ಲಿನ ಮನೆಗಳು. ಮಳೆಗಾಲ ಪ್ರಾರಂಭವಾಗುವ ಮೊದಲೇ ಪ್ರತಿವರ್ಷ ಮಾಡಿಗೆ ಹೊದಿಸಿದ ಹುಲ್ಲನ್ನು ಬದಲಾಯಿಸಬೇಕು. ಆದರೆ ಒಬ್ಬ ಸೋಮಾರಿ ನಾಳೆ ಮಾಡಿದರಾಯ್ತು ಎಂದು ಮುಂದೂಡುತ್ತಲೇ ಬರುತ್ತಾನೆ. ಮಳೆ ಪ್ರಾರಂಭವಾಗಿ ಬಿಡುತ್ತದೆ. ಮನೆಯೊಳಗೆಲ್ಲ ಸೋರುವ ನೀರು. ಮೈ ಒದ್ದೆಯಾಗಿ ಗಂಡ ನಡುಗುತ್ತಾ ಕೂತಿದ್ದನ್ನು ನೋಡಿದ ಅವನ ಹೆಂಡತಿ `ನಾಳೆ ಎಂದವನ ಮನೆ ಹಾಳು’ ಎಂದು ಬಯ್ಯುತ್ತಾಳೆ. ಯಾವುದೇ ಕಾರ್ಯವಿರಲಿ, ಅದನ್ನು ಸಕಾಲದಲ್ಲಿ ಮಾಡಿ ಮುಗಿಸದಿದ್ದರೆ ನಷ್ಟ … Continue reading ನಾಳೆ ಎಂದವನ ಮನೆಹಾಳು